Monday, January 25, 2010

ಆ ಸ್ವತಂತ್ರ ಸ್ವರ್ಗಕೆ : aa svataMtra svargake


ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ ||ಪ||

ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ
ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ ||೧||

ಎಲ್ಲಿ ಮನೆಯ ಅಡ್ಡಗೋಡೆ ಇಲ್ಲದೆಯೆ ವಿಶಾಲವೋ
ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ ||೨||

ಎಲ್ಲಿ ಸತತ ಕರ್ಮ ಪೂರ್ಣಸಿದ್ಧಿ ಪಡೆದು ಮೆರೆವುದೋ
ಎಲ್ಲಿ ತಿಳಿವು ಕಟ್ಟಳೆಯ ಮಳಲ ತೊರೆದು ಹರಿವುದೋ ||೩||

ಎಲ್ಲಿ ನೀನು ನಮಗೆ ಧೈರ್ಯ ಎಲ್ಲಿ ನೀನು ನಮಗೆ ಸ್ಥೈರ್ಯ
ವರವಿಕಾಸಗೊಳಿಸಿ ಸದಾ ಅಭ್ಯುದಯವ ಕೋರುವೆಯೋ ||೪||

aa svataMtra svargake namma nADu ELalELalELalELali ||pa||

elli manavu nirBayadi taleyanetti niluvudO
elli j~jAna sudhApAna ellarigU siguvudO ||1||

elli maneya aDDagODe illadeye viSAlavO
elli mAtu satyadALadiMda hommi baruvudO ||2||

elli satata karma pUrNasiddhi paDedu merevudO
elli tiLivu kaTTaLeya maLala toredu harivudO ||3||

elli nInu namage dhairya elli nInu namage sthairya
varavikAsagoLisi sadA aByudayava kOruveyO ||4||

4 comments:

Rajaneesh Kashyap said...

ee geeteyanna kannadadlli baredavaru yarenbudannu tilisuvira.

-- Rajaneesha

ಕಾರ್ಯಕರ್ತ said...

Rajaneesh Ji, nanagu kuda gottilla. samanyavagi sanghada hadugalannu baredavara hesaru prakatisalaguvudilla. gottadadare nimage tilisuttene.

Anonymous said...

ಬಂಗಾಳೀ ಮೂಲ - ರವೀಂದ್ರನಾಥ ಠಾಗೋರ್. ತುರ್ತು ಪರಿಸ್ಥಿಯ ಸಮಯದಲ್ಲಿ (1975) ಹೋರಾಟದ ಅಧಿಕೃತ ಗೀತೆಯಾಗಿ ತುರ್ತು.

Anonymous said...

ಗೀತೆಯಾಗಿತ್ತು