Monday, January 25, 2010

ಕಬಡ್ಡಿ ಕಬಡ್ಡಿ ಉಸಿರಾಡಿ : kabaDDi kabaDDi usirADi


ಕಬಡ್ಡಿ ಕಬಡ್ಡಿ ಉಸಿರಾಡಿ ಶಕ್ತಿಯ ಆಟವ ಆಡೋಣ
ಸಂಘಸ್ಥಾನದಿ ಹೊರಳಾಡಿ ಮಾತೆಯ ನಿತ್ಯ ಸ್ಮರಿಸೋಣ ||ಪ||

ದಂಡವ ಕೈಯಲಿ ತಿರುಗಿಸುತ ಸಾಹಸದನುಭವ ಸವಿಯೋಣ
ಹೆಜ್ಜೆಗೆ ಹೆಜ್ಜೆಯ ಕೂಡಿಸುತ ಸಂಘದ ಮಂತ್ರವ ಜಪಿಸೋಣ ||೧||

ಚೀರಾಟ ಕೂಗಾಟ ಹಾಆಟಗಳಲಿ, ಸ್ನೇಹದ ಸುಧೆಯನು ಹರಿಸೋಣ
ಅನುಶಾಸನದ ಬಂಧನದಿ ಶಿಸ್ತಿನ ಸೈನಿಕರಾಗೋಣ ||೨||

ಭಗವಾಧ್ವಜದ ಅಡಿಯಲ್ಲಿ ಮೈಮನ ಮರೆತು ಕಲೆಯೋಣ
ಕಥೆ ಕವನಗಳ ಸ್ಪೂರ್ತಿಯಲಿ ಬಾಳಲಿ ಹರ್ಷವ ತುಂಬೋಣ ||೩||

ಸಂಘಸ್ಥಾನದ ಪ್ರತಿಕಣದಲ್ಲಿಯೂ ಪಾವಿತ್ರ್ಯದ ಹೊಳೆ ಹರಿದಿಹುದು
ಪ್ರತಿಯೊಂದಾಟದಿ ಪ್ರತಿ ನಿಮಿಷದಲಿ ಧ್ಯೇಯದ ಚೇತನ ಹೊಮ್ಮಿಹುದು ||೪||

kabaDDi kabaDDi usirADi Saktiya ATava ADONa
saMGasthAnadi horaLADi mAteya nitya smarisONa ||pa||

daMDava kaiyali tirugisuta sAhasadanuBava saviyONa
hejjege hejjeya kUDisuta saMGada maMtrava japisONa ||1||

cIrATa kUgATa hARATagaLali, snEhada sudheyanu harisONa
anuSAsanada baMdhanadi Sistina sainikarAgONa ||2||

BagavAdhvajada aDiyalli maimana maretu kaleyONa
kathe kavanagaLa spUrtiyali bALali harShava tuMbONa ||3||

saMGasthAnada pratikaNadalliyU pAvitryada hoLe haridihudu
pratiyoMdATadi prati nimiShadali dhyEyada cEtana hommihudu ||4||

No comments: