Monday, January 25, 2010

ಎದ್ದು ನಿಲ್ಲು ವೀರ ದೇಶ ಕರೆದಿದೆ : eddu nillu vIra


ಎದ್ದು ನಿಲ್ಲು ವೀರ, ದೇಶ ಕರೆದಿದೆ
ಪಡೆಯ ಕಟ್ಟು ಧೀರ, ಸಮರ ಕಾದಿದೆ
ರಣ ಕಹಳೆಯ ಹೂಂಕಾರದ ಸದ್ದು ಮೊರೆದಿದೆ
ರಕ್ತಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ |ಪ||

ಗಡಚಿಕ್ಕುವ ಆಕ್ರಂದನ ನರಳಾಟ ಚೀರಾಟ
ಕಿವಿಗೊಡದಿರು ಎದೆಗೆಡದಿರು ನುಗ್ಗುತಲಿ ಮುಂದಕೆ
ದೇಹ ಬಿದ್ದು ಹೆಣಗಳುರುಳಿ ರಕ್ತದಾಟದೋಕುಳಿ
ಹೋರುವ ಛಲ ಕುಗ್ಗದಿರಲಿ ಧೈರ್ಯ ಮೇರು ಪರ್ವತ ||೧||

ಹೆಜ್ಜೆ ಹೆಜ್ಜೆ ತುಳಿತಕೆ ನೆಲದೆದೆಯ ಕಂಪನ
ಮುಂದೆ ಮುಂದೆ ಧಾವಿಸ ಕೇಳಿ ವಿಜಯ ಸ್ಪಂದನ
ಎದೆತಟ್ಟಿ ತೊಡೆ ತಟ್ಟಿ ಅಬ್ಬರಿಸುತ ಚಲಿಸಲಿ
ವೈರಿ ಶಿಬಿರ ತತ್ತರಿಸುವ ಅಗ್ನಿಜ್ವಾಲೆ ಉಜ್ವಲ ||೨||

ತಾಯಿಯ ಕರೆ ಮೊಳಗಿದೆ ಹೃದಯದೀಪ ಬೆಳಗಿದೆ
ಶಕ್ತಿಧೂಪ ಹರಡಿದೆ ದಿಗಂತದೆತ್ತರ
ಸ್ವಾತಂತ್ರದ ಕರೆಯಲಿ ರಾಷ್ಟ್ರಪುರುಷ ಪೂಜೆಗೆ
ಉರಿಯುತಿರಲಿ ಕಾಂತಿದುಂಬಿ ತ್ಯಾಗದೀಪದಾರತಿ ||೩||

eddu nillu vIra, dESa karedide
paDeya kaTTu dhIra, samara kAdide
raNa kahaLeya hUMkArada saddu moredide
raktasikta balipIThada dRuSya meredide |pa||

gaDacikkuva AkraMdana naraLATa cIrATa
kivigoDadiru edegeDadiru nuggutali muMdake
dEha biddu heNagaLuruLi raktadATadOkuLi
hOruva Cala kuggadirali dhairya mEru parvata ||1||

hejje hejje tuLitake neladedeya kaMpana
muMde muMde dhAvisa kELi vijaya spaMdana
edetaTTi toDe taTTi abbarisuta calisali
vairi Sibira tattarisuva agnijvAle ujvala ||2||

tAyiya kare moLagide hRudayadIpa beLagide
SaktidhUpa haraDide digaMtadettara
svAtaMtrada kareyali rAShTrapuruSha pUjege
uriyutirali kAMtiduMbi tyAgadIpadArati ||3||

No comments: