Monday, January 25, 2010

ಎಲ್ಲ ಬೇಧಗಳ ಮರೆತು : ella bEdhagaLa maretu


ಎಲ್ಲ ಬೇಧಗಳ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ |ಪ||

ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು
ಜಾತಿಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರು ಕೈನೀಡಿ ||೧||

ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೇ ಇಂದು
ಮನ ಮಾಡಿಂದು ದುಡಿಯಲು ಬಂದು ಆಲಸಬಿಡುತಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೇ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನು ||೨||

ಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದೂ
ಕುಡಿಯುವುದೊಂದೇ ಜಲ, ಉಸಿರಾಡುವುದೊಂದೇ ಗಾಳಿ
ಹರಿಯುವುದೊಂದೇ ರಕ್ತವು ನಮ್ಮಲಿ ಭೇದವು ಏಕಾಗೀ? ||೩||

ella bEdhagaLa maretu banniri nAvu samAna
sAruva iMdu ellaru hiMdu iduve navagaana |pa||

duDidaru kANuta kESavaraMdu aikyada suMdara kanasu
paNatoDiriMdu mADuveveMdu ellavanU nanasu
jAtimatagaLa dhanika baDavara bhEdava tarabEDi
biddavaranu mElettuva banni ellaru kainIDi ||1||

gaMge tuMge kaavEriya jala namagAgiyE iMdu
mana mADiMdu duDiyalu baMdu AlasabiDutiMdu
puNyada maNNidu beLesalu baa baMgArada beLeyannu
bevarina hoLeyE hariyali iMdu koccuta koLeyannu ||2||

kole suligegaLa atyAcArada koneyAgali iMdu
snEhada prEmada BrAtRutvada sele hariyali eMdeMdU
kuDiyuvudoMdE jala, usirADuvudoMdE gALi
hariyuvudoMdE raktavu nammali BEdavu EkAgI? ||3||

No comments: