Monday, January 25, 2010

ಎಚ್ಚರಾಗು ಎಚ್ಚರಾಗು : eccarAgu eccarAgu dhIra


ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ
ಭರತಮಾತೆ ಕರೆಯುತಿಹಳು ಓಗೊಡುತ ಬಾರ
ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ?
ತಾಯ ಬಂಧು ಬಿಡಿಸುವಂದು ತೋರಿದಂಥ ಧೈರ್ಯ? ||ಪ||

ಚಲಿಸಲಿಲ್ಲ ಧವಳಗಿರಿಯು ಅಚಲ ನಿಂತ ನಿಲುವು
ನಿಲ್ಲನಿಲ್ಲ ಕಡಲ ಮೊರೆತ ಕ್ಷಣವು ಇಲ್ಲ ಬಿಡುವು
ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನನೀಡಿ
ನಿನ್ನ ಮನವದೇಕೆ ಬದಲು ಯಾರ ಮಂತ್ರ ಮೋಡಿ? ||೧||

ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ
ದರ್ಪ ದಮನವಿರ್ಪ ಮತಾಂತರದ ವಿಕಟಲೀಲೆ
ಎಚ್ಚರಾಗಿ ಬಾರೋ ಮರೆತು ತುಚ್ಛವಾದ ಭೇದ
ಎಲ್ಲೆ ಮೀರಿ ಮೊಳಗಿ ಬರಲಿ ಐಕ್ಯ ಶಂಖನಾದ ||೨||

ಬೆಳಗು ಧರ್ಮ ಸಂಸ್ಕೃತಿಯನು ಮೆರೆಯಬೇಡ ಎಂದೂ
ಮಾನಧನನು ನೀನು ನಿನ್ನೊಳಿರುವ ರಕ್ತ ಹಿಂದು
ಒರೆಸು ಬಾರೊ ತಾಯ ಮೊಗದ ಕಣ್ಣೀರ ಧಾರೆ
ಸಾರು ಬಳಿಗೆ ಕರೆಯುತಿಹುದು ನಾಡ ಭಾಗ್ಯತಾರೆ ||೩||

eccarAgu eccarAgu eccarAgu dhIra
BaratamAte kareyutihaLu OgoDuta bAra
elli ninna kShAtratEja meredu niMta Saurya?
tAya baMdhu biDisuvaMdu tOridaMtha dhairya? ||pa||

calisalilla dhavaLagiriyu acala niMta niluvu
nillanilla kaDala moreta kShaNavu illa biDuvu
daNiyalilla gaMge tuMge ninage annanIDi
ninna manavadEke badalu yAra maMtra mODi? ||1||

anyarella tuLivaralla namma nelada mEle
darpa damanavirpa matAMtarada vikaTalIle
eccarAgi bArO maretu tucCavAda BEda
elle mIri moLagi barali aikya SaMKanAda ||2||

beLagu dharma saMskRutiyanu mereyabEDa eMdU
mAnadhananu nInu ninnoLiruva rakta hiMdu
oresu bAro tAya mogada kaNNIra dhAre
sAru baLige kareyutihudu nADa BAgyatAre ||3||

No comments: