Thursday, October 14, 2010

ಸರ್ವ ಸುಂದರ ನಾಡು : sarva suMdara nADu


ಸರ್ವ ಸುಂದರ ನಾಡು ವೀರವರ್ಯರ ಬೀಡು
ಕರ್ಮಭೂಮಿಯ ನೋಡು ಭಾರತದೊಳಿಲ್ಲಿ ||ಪ||

ಸಾಗರದ ಅಂಚಿನಲಿ ಹಿಮಗಿರಿಯ ಪಾದದಲಿ
ದಿವ್ಯಭೂಭಾಗವಿದು ಮೆರೆಯುತಿಹುದಿಲ್ಲಿ ||೧||

ಪುಣ್ಯನದಿಗಳ ತಟದಿ ಭವ್ಯದೇಗುಲ ನೆಲೆಸಿ
ಸರ್ವಶಕ್ತಿಯ ರೂಪ ಬೆಳಗುತಿಹುದಿಲ್ಲಿ ||೨||

ವೇದಘೋಷಗವಗೈವ ಋಷಿವರ್ಯರಾಶ್ರಮವು
ಸಾಧುಸಂತರ ಬಾಳ್ವೆ ಸಾಗುತಿಹುದಿಲ್ಲಿ ||೩||

ಸೌಜನ್ಯದಾ ಪುಷ್ಪ ಘಮಘಮಿಸಿ ಸೂಸಿರಲು
ಸೌಹಾರ್ದದಾ ಎಲರು ಬೀಸುತಿಹುದಿಲ್ಲಿ ||೪||

ವಿಶ್ವಶಾಂತಿಯ ನಾದ ಜಗಕೆಲ್ಲ ಹರಡಿರಲು
ವಿಶ್ವದೃಷ್ಟಿಯ ಕೇಂದ್ರ ತೋರುತಿಹುದಿಲ್ಲಿ ||೫||

sarva suMdara nADu vIravaryara bIDu
karmaBUmiya nODu BAratadoLilli ||pa||

sAgarada aMcinali himagiriya pAdadali
divyaBUBAgavidu mereyutihudilli ||1||

puNyanadigaLa taTadi BavyadEgula nelesi
sarvaSaktiya rUpa beLagutihudilli ||2||

vEdaGOShagavagaiva RuShivaryarASramavu
sAdhusaMtara bALve sAgutihudilli ||3||

soujanyadA puShpa GamaGamisi sUsiralu
souhaardadA elaru bIsutihudilli ||4||

viSvaSAMtiya nAda jagakella haraDiralu
viSvadRuShTiya kEMdra tOrutihudilli ||5||

No comments: