Thursday, October 14, 2010

ಸದಾ ಮೊಳಗುತಿರಲಿ : sadA moLagutirali


ಸದಾ ಮೊಳಗುತಿರಲಿ ದುಂದುಭಿಯ ಘೋಷ
ಪ್ರತಿನಿಧಿಸಿ ಪ್ರತಿಧ್ವನಿಸಿ ದಿಗ್ವಿಜಯದಾಶಾ ||ಪ||

ಪಾಂಡುರಂಗನ ಕಂಡ ಪಾಂಚಜನ್ಯದ ಧ್ವನಿಗೆ
ಪಾಂಡವರ ಗುಂಡಿಗೆಯು ಗರಿಗೆದರಿದಂತೆ
ಚಂಡಿ ಚಾಮುಂಡಿಯರ ಅಟ್ಟಹಾಸವ ಕಂಡು
ಭಂಡ ರುಂಡಗಳಂದು ಧರೆಗುರುಳಿದಂತೆ ||೧||

ಪ್ರಳಯ ರುದ್ರನ ಢಮರುವಾದನದ ಸ್ಪಂದನದಿ
ತಾಂಡವದ ತಾಳಲಯ ರೂಪುಗೊಂಡಂತೆ
ಸ್ವರ್ಗದಿಂ ಧುಮ್ಮುಕ್ಕಿ ಭೋರ್ಗರೆವ ಜಲಧಾರೆ
ಜಗದಗಲ ಸಂಭ್ರಮದಿ ಹರಿದಾಡಿದಂತೆ ||೨||

ಭರತ ಖಂಡ ಪ್ರಚಂಡ ಗಂಡುಗಲಿಗಳ ತಂಡ
ಚಂಡಮಾರುತದಂತೆ ಅಪ್ಪಳಿಸಿದಾಗ
ಅಖಿಲ ಭೂಮಂಡಲವೆ ಥರಥರನೆ ಕಂಪಿಸುತ
ವೈರಿಕುಲ ಉದ್ಧಂಡ ಶರಣು ಬಂದಾಗ ||೩||

ರಿಪುಧಮನಿಗಳ ದಮನ ಖಳ ಶಕುನಿಗಳ ಶಮನ
ಗಮನವೆಮ್ಮದು ಗಹನ ಗಗನದೆಡೆಗೆ
ನಿಲ್ಲದಿದು ರಣಘೋಷ ವಾದನದ ಅನುರಣನ
ಗೆಲ್ಲುವುದೆ ಗುರಿಯೆಮದು ಕಟ್ಟಕಡೆಗೆ ||೪||

sadA moLagutirali duMduBiya GOSha
pratinidhisi pratidhvanisi digvijayadASA ||pa||

pAMDuraMgana kaMDa pAMcajanyada dhvanige
pAMDavara guMDigeyu garigedaridaMte
caMDi cAmuMDiyara aTTahAsava kaMDu
BaMDa ruMDagaLaMdu dhareguruLidaMte ||1||

praLaya rudrana DhamaruvAdanada spaMdanadi
tAMDavada tALalaya rUpugoMDaMte
svargadiM dhummukki BOrgareva jaladhAre
jagadagala saMBramadi haridADidaMte ||2||

Barata khaMDa pracaMDa gaMDugaligaLa taMDa
caMDamArutadaMte appaLisidAga
aKila BUmaMDalave tharatharane kaMpisuta
vairikula uddhaMDa SaraNu baMdAga ||3||

ripudhamanigaLa damana KaLa SakunigaLa Samana
gamanavemmadu gahana gaganadeDege
nilladidu raNaGOSha vAdanada anuraNana
gelluvude guriyemadu kaTTakaDege ||4||

No comments: