Thursday, October 14, 2010

ಶಕ್ತಿಸ್ವರೂಪಿಣಿ ಭಾರತಮತೆಯ : SaktisvarUpiNi BAratamateya


ಶಕ್ತಿಸ್ವರೂಪಿಣಿ ಭಾರತಮತೆಯ ದುರ್ಜಯ ಪುನರವತಾರ
ಮೂಡುತ್ತಲಿದೆ ಭಾರತದಲ್ಲೆಲ್ಲೆಡೆ ನವಚೈತನ್ಯದ ಸಂಚಾರ ||ಪ||

ಮಕ್ಕಳ ಮೈಮರೆವಿನ ಯುಗ ಕಳೆದಿದೆ ಅಳಿದಿದೆ ಅಳುಕಿನ ತಿಮಿರ
ಏಕಾತ್ಮತೆ ಅರುಣ ಪ್ರಭೆ ಮೂಡಿದೆ ಅಡಗಿದೆ ಒಡಕಿನ ಕುಹಕ
ಶತ್ರುವಿನಾಶದ ಆಶ್ವಾಸನೆಗಿದೆ ಜಗಕಿದೆ ಶಾಂತಿಯ ಶಪಥ
ವಿಜಯದ ಘಳಿಗೆಯಿದೋ ಸಮೀಪಿಸಿದೆ ಮುನ್ನುಗ್ಗಿದೆ ಯುವ ಪಥಕ ||೧||

ಸಾವಿಲ್ಲದ ನಾಡಿನ ಸುತರೆದ್ದರು ಯಜ್ಞದ ಸಿದ್ಧತೆಗೆ
ಹಿಂದುತ್ವದ ಅಮರಗಂಗೆ ಹರಿದಿದೆ ಸೃಷ್ಟಿಯ ಏಳಿಗೆಗೆ
ಯುಗಯುಗಗಳ ಇತಿಹಾಸದ ವಿಜಯದ ವೈಭವ ಶಿಖರಕ್ಕೆ
ನವ ಇತಿಹಾಸದ ಧ್ವಜವನೇರಿಸುವ ಉತ್ಸಾಹದ ರಭಸಕ್ಕೆ ||೨||

ಜಡವಾದದ ಮೌಢ್ಯದ ಕ್ರೌರ್ಯದ ಸಂಚಿನ ಕಂತೆಗೆ ಕೊನೆ ಹೇಳಿ
ತ್ಯಾಗ ಶೀಲ ವಿಶ್ವಾಸದ ಶ್ರದ್ಧೆಯ ಕಹಳೆಯಿದೋ ಕೇಳಿ
ಹಿಂದು ರಾಷ್ಟ್ರದ ಹೊಸ ಮುಂಜಾವಿನ ಮಂಗಳ ಕ್ಷಣ ಬಂದಿದೆ ಏಳಿ
ಜಗದೆಲ್ಲಡೆಯ ಜಡತೆಯ ತೊಡೆಯುವ ದಾಯಿತ್ವಕೇ ಮೈತಾಳಿ ||೩||

SaktisvarUpiNi BAratamateya durjaya punaravatAra
mUDuttalide BAratadallelleDe navacaitanyada saMcAra ||pa||

makkaLa maimarevina yuga kaLedide aLidide aLukina timira
EkAtmate aruNa praBe mUDide aDagide oDakina kuhaka
SatruvinASada ASvAsanegide jagakide SAMtiya Sapatha
vijayada GaLigeyidO samIpiside munnuggide yuva pathaka ||1||

sAvillada nADina sutareddaru yaj~jada siddhatege
hiMdutvada amaragaMge haridide sRuShTiya ELigege
yugayugagaLa itihAsada vijayada vaiBava SiKarakke
nava itihAsada dhvajavanErisuva utsAhada raBasakke ||2||

jaDavAdada mouDhyada krouryada saMcina kaMtege kone hELi
tyAga SIla viSvAsada Sraddheya kahaLeyidO kELi
hiMdu rAShTrada hosa muMjAvina maMgaLa kShaNa baMdide ELi
jagadellaDeya jaDateya toDeyuva dAyitvakE maitALi ||3||

No comments: