Tuesday, October 12, 2010

ನಿನ್ನ ನೆನಪು ತರಲಿ ನಮಗೆ : ninna nenapu tarali


ನಿನ್ನ ನೆನಪು ತರಲಿ ನಮಗೆ ಹೃದಯದಾ ವಿಕಾಸ
ಅದರ ಅರಿವಿನಲ್ಲಿ ದೂರವಾಗಲೆಲ್ಲ ಪಾಶ
ಮಾಯವಾಗಿ ಸ್ವಾರ್ಥವೆಲ್ಲ ಮೂಡಲೊಂದು ಆಶಾ
ನಿನ್ನ ಕಣದ ಅಣುವು ನಾವು ಆಗಲೆಂಬ ಆಶಾ ||ಪ||

ಚಂಡಮಾರುತದ ನಡುವೆ ಒಂದೆ ದೀಪ ಜ್ವಾಲೆ
ಉರಿಯುತಿತ್ತು ದಿಟ್ಟತನದಿ ಸೊರಗಿ ಹೋಯ್ತು ಗಾಳಿ
ಕತ್ತಲನ್ನು ದೂರ ಸರಿಸಿ ಬೆಳಗಿ ಅದರ ಜ್ವಾಲೆ
ಹೊತ್ತಿಸಿತು ದೀಪಗಳನು ಆಯ್ತು ದೀಪ ಮಾಲೆ ||೧||

ಹಿಂದು ನಾವೆ ಮುಳುಗಿಸಲು ಏಳುತಿದ್ದ ಅಲೆಗಳು
ನಾವಿಕನೆ ನಿನ್ನ ಮುಂದೆ ಉಡುಗಿ ಹೋಯ್ತು ತಳದಲಿ
ಸಾಗು ಸಾಗುತಲಿ ತಟವ ಸೇರಲಿದೆ ಕೊನೆಯಲಿ
ಕೋಟಿ ಕೋಟಿ ಪಯಣಗಿರ ಸಂತಸದ ಮಧ್ಯದಲಿ ||೨||

ತಂಪು ತರುತಲ್ಲಿತ್ತು ಬೆಂದ ಜೀವಿಗಳಿಗೆ ನಿನ್ನ ನುಡಿ
ಅನಂತ ಗೆಲುವು ನಲಿವು ನಿನ್ನ ಹಸನ್ಮುಖವ ನೋಡಿ
ನಿನ್ನಲಿದ್ದ ಅಗ್ನಿಯೆಲ್ಲ ಹೃದಯಗಳಲಿ ತಾವ ಮಾಡಿ
ನಗುತ ಬಲಿಯನೀವ ಭಾವ ಬಂದಿತರಿವು ಮೂಡಿ ||೩||

ಜ್ವಾಲಮುಖಿಯ ತೆರದಿ ನಿನ್ನ ನಿಲುವು ಬಲು ಗಂಭೀರ
ನಾಡ ಬಂಧು ಬಾಂಧವರಲಿ ನಿನ್ನೊಲುಮೆ ಅಪಾರ
ಬೇಡುವೆವು ಕೇಶವ ಸದಾ ಹರಕೆ ನೀಡು
ಈಶ ಕಾರ್ಯ ಮಾಡುತಲಿ ಸಾಗಲೆಮ್ಮ ಬಾಳು ||೪||

ninna nenapu tarali namage hRudayadA vikAsa
adara arivinalli dUravAgalella pASa
mAyavAgi svArthavella mUDaloMdu ASA
ninna kaNada aNuvu nAvu AgaleMba ASA ||pa||

caMDamArutada naDuve oMde dIpa jvAle
uriyutittu diTTatanadi soragi hOytu gALi
kattalannu dUra sarisi beLagi adara jvAle
hottisitu dIpagaLanu Aytu dIpa mAle ||1||

hiMdu nAve muLugisalu ELutidda alegaLu
nAvikane ninna muMde uDugi hOytu taLadali
sAgu sAgutali taTava sEralide koneyali
kOTi kOTi payaNagira saMtasada madhyadali ||2||

taMpu tarutallittu beMda jIvigaLige ninna nuDi
anaMta geluvu nalivu ninna hasanmuKava nODi
ninnalidda agniyella hRudayagaLali tAva mADi
naguta baliyanIva BAva baMditarivu mUDi ||3||

jvAlamuKiya teradi ninna niluvu balu gaMBIra
nADa baMdhu bAMdhavarali ninnolume apAra
bEDuvevu kESava sadA harake nIDu
ISa kArya mADutali sAgalemma bALu ||4||

No comments: