Thursday, October 14, 2010

ಉಜ್ವಲ ಇತಿಹಾಸ ಎಮ್ಮದು : ujvala itihAsa emmadu


ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು ||ಪ||

ಪವಿತ್ರ ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಗಿಕಥನು
ಗುರುಗೋವಿಂದನ ವೀರ ಸುಪುತ್ರರು ಎತ್ತರು ಅಸುವನು ಹರುಷದಲಿ
ಧೈರ್ಯದಿ ಗೋಡೆಯ ಮಧ್ಯದಲಿ ||೧||

ನಾಡಿನ ಗೌರವ ರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು
ರಜಪೂತರ ನಿಜ ತೇಜವ ತೋರುತ ದೇಶವದೊಳೆದನು ಕಂಗೆಟ್ಟು
ಮಾಡಿದ ಜನತೆಯ ಒಗ್ಗಟ್ಟು ||೨||

ವೀರ ಶಿವಾಜಿಯು ಕಟ್ಟಿದ ಸೇನೆಯು ಎದುರಿಸೆ ಮೊಘಲರ ಕಿರುಕುಳವ
ವೀರ ಶಿರೋಮಣಿ ಝಾನ್ಸಿ ರಾಣಿಯು ನಿಂತಳು ಬ್ರಿಟಿಷರ ಎದುರಾಗಿ
ಮಾತೆಯ ಮುಕ್ತಿಯ ಕರೆಗಾಗಿ ||೩||

ರಕ್ತದಿ ಬರೆದಿಹ ವೀರ ಚರಿತ್ರೆಯ ಪಠಿಸುವ ಪ್ರತಿದಿನ ಹೆಮ್ಮೆಯಲಿ
ಸಾಹಸ ಕಾರ್ಯವಗೈದಿಹ ವೀರರ ಸ್ಮರಿಸುತ ಸಾಗುವ ಪಥದಲ್ಲಿ
ನಮಿಸುವ ಅವರನು ಮನದಲ್ಲಿ ||೪||

ವಂದೇ ಮಾತರಮ್ ವಂದೇ ಮಾತರಮ್

ujvala itihAsa emmadu BArata nADina sphUrtiyadu ||pa||

pavitra dharmada gouravakAgi mRutyuvanappida hagikathanu
gurugOviMdana vIra suputraru ettaru asuvanu haruShadali
dhairyadi gODeya madhyadali ||1||

nADina gourava rakShaNegAgi sahisida rANanu kaShTavanu
rajapUtara nija tEjava tOruta dESavadoLedanu kaMgeTTu
mADida janateya oggaTTu ||2||

vIra SivAjiyu kaTTida sEneyu edurise moGalara kirukuLava
vIra SirOmaNi JAnsi rANiyu niMtaLu briTiShara edurAgi
mAteya muktiya karegAgi ||3||

raktadi barediha vIra caritreya paThisuva pratidina hemmeyali
sAhasa kAryavagaidiha vIrara smarisuta sAguva pathadalli
namisuva avaranu manadalli ||4||

vaMdE mAtaram vaMdE mAtaram

No comments: