Friday, October 8, 2010

ಭರತ ದೇಶದಿ ಮರಳಿ ನಡೆಯಲಿ : Barata dESadi maraLi naDeyali


ಭರತ ದೇಶದಿ ಮರಳಿ ನಡೆಯಲಿ ಶೌರ್ಯ ಸಾಹಸದರ್ಚನೆ
ಹೆಮ್ಮೆ ಸಾರುತ ಚಿಮ್ಮಿ ಹೊಮ್ಮಲಿ ಸಿಂಹ ವಿಕ್ರಮ ಘರ್ಜನೆ ||ಪ||

ಪರಮ ಪುರುಷನ ರಾಮಚಂದ್ರನ ಸೂರ್ಯ ಕುಲಸಂತಾನರೆ
ಶುದ್ಧರಕ್ತದ ಕ್ಷಾತ್ರತೇಜದ ಧೀರ ಪೌರುಷವಂತರೆ
ಶೂರವೀರನು ಪೌರವಾರ್ಯನು ಶಕ್ತಿಬಿತ್ತಿಹ ನೆಲವಿದು
ಪುರುಷಸಿಂಹನು ಪೃಥ್ವಿರಾಜನು ನೆತ್ತರಿತ್ತಿಹ ನಾಡಿದು ||೧||

ಮಾನಕಾಗಿಯೇ ಬಾಳಿ ಬದುಕಿದ ಜಾತಿವಂತರ ತೌರಿದು
ಮಾತಿಗಾಗಿಯೆ ಬಲಿಯ ನೀಡಿದು ನೀತಿವಂತರ ನೆಲೆಯಿದು
ತುಂಡು ಭೂಮಿಗೆ ಕೋಡಿ ನೆತ್ತರ ಹರಿಸಿದೊಡೆಯರ ಬೀಡಿದು
ಮಣ್ಣಿಗಾಗಿಯೆ ಮಣ್ಣುಗೂಡಿದ ತ್ಯಾಗಿ ಮಕ್ಕಳ ಮನೆಯಿದು ||೨||

ಧವಸ ಧಾನ್ಯದಿ ನೀರು ನೆಲದಲಿ ಕೆಚ್ಚಿನಚ್ಚರಿ ತುಂಬಿದೆ
ದೇಶವಿದರೊಳು ಗಾಳಿಬೆಳಕೊಳು ಸಚ್ಚರಿತೆ ಬೇರೂರಿದೆ
ಇಲ್ಲಿ ಜನಿಸಿದ ಹುಲ್ಲೆ ಹಸುಗಳು ಹುಲಿಯ ಹೆದರಿಸಬಲ್ಲವು
ಜನರನೆದುರಿಸೆ ಬೆದರದಿರುವುದೆ ತುಂಬಿದೇ ಜಗವೆಲ್ಲವು ||೩||

ಒಂದೇ ಮಾತೆಯ ಹಿಂದು ಮಕ್ಕಳು ಬಂಧು ಭಾವವ ಹೊಂದಿರೆ
ದಾಸ್ಯದೊಡಲೊಳು ಮೇಲಕೆದ್ದಿರಲು ಅರುಣಕಾಂತಿಯ ಹೊಂದಿರೆ
ಏಳಿರೇಳಿರಿ ಸಹಜರೂಪದ ಶೌರ್ಯದುರಿಮೈ ತಾಳಿರಿ
ವಿಶ್ವದೊಡೆಯರದಾರು ಎನ್ನುವ ಪ್ರಶ್ನೆಗುತ್ತರ ಹೇಳಿರಿ ||೪||

Barata dESadi maraLi naDeyali Sourya sAhasadarcane
hemme sAruta cimmi hommali siMha vikrama Garjane ||pa||

parama puruShana rAmacaMdrana sUrya kulasaMtAnare
Suddharaktada kShAtratEjada dhIra pouruShavaMtare
SUravIranu pouravAryanu Saktibittiha nelavidu
puruShasiMhanu pRuthvirAjanu nettarittiha nADidu ||1||

mAnakAgiyE bALi badukida jAtivaMtara touridu
mAtigAgiye baliya nIDidu nItivaMtara neleyidu
tuMDu BUmige kODi nettara harisidoDeyara bIDidu
maNNigAgiye maNNugUDida tyAgi makkaLa maneyidu ||2||

dhavasa dhAnyadi nIru neladali keccinaccari tuMbide
dESavidaroLu gALibeLakoLu saccarite bErUride
illi janisida hulle hasugaLu huliya hedarisaballavu
janaranedurise bedaradiruvude tuMbidE jagavellavu ||3||

oMdE mAteya hiMdu makkaLu baMdhu BAvava hoMdire
dAsyadoDaloLu mElakeddiralu aruNakAMtiya hoMdire
ELirELiri sahajarUpada Souryadurimai tALiri
viSvadoDeyaradAru ennuva praSneguttara hELiri ||4||

No comments: