Thursday, April 22, 2010

ಗೆಲುದನಿಯು ಗುಡುಗುಡುಗಿ : geludaniyu guDuguDugi


ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ
ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ
ಶತಕವಿದನಳೆದು ಮರುಶತಕಕಿದೊ ಹಿಂದುತ್ವ
ವೀರರಸ ಹೊನಲುದಿಸಿದೆ ||ಪ||

ಕತ್ತಲೆಯ ಕೌರವರು ಸುತ್ತನೊರೆದ್ದಿರಲು
ಕ್ಷುದ್ರ ದೌರ್ಬಲ್ಯಗಳಿಗಿನ್ನೆಲಿಯ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ
ಪಾಂಡವಗೆ ರೋಮಾಂಚನ
ಧರ್ಮಸಂರಕ್ಷಣೆಗೆ ರಾಷ್ಟ್ರಪುನರುನ್ನತಿಗೆ ಧರ್ಮವೆ ಅವತರಿಸಿದೆ ||೧||

ನಮಗೋರ್ವಳೆ ತಾಯಿ ನಿತ್ಯವಾತ್ಸಲ್ಯಮಯಿ
ಅವಳು ಸಲಹಿದ ಸುತರು ನಾವೆಂಬ ನೆನಪು
ಬರದೆಂಬುದೇನಿಲ್ಲ ಎನ್ನ ಸಾಧನೆಯೆಲ್ಲ ತಾಯ ಗೌರವಕೇ ಮುಡಿಪು
ಅರ್ಪಣೆಯೊಳಗಾನಂದ ನೇರ್ಪಗೊಂಡಿಹುವುದಿಲ್ಲಿ
ರಾಷ್ಟ್ರೀಯತೆಯು ಮೆರೆದಿದೆ ||೨||

ಕಪಟ ಮತಾಂತರ ಆಮಿಷ ಅಂಜಿಕೆ
ನಾಡಿನ ನಾಡಿಯ ವ್ಯಾಪಿಸಿರೆ
ಸ್ವತ್ವವ ಮರೆಸಿ ವಿದೇಶೀಯ ಮೆರೆಸುವ ಭ್ರಮೆಗಳೆ ಬದುಕನು ರೂಪಿಸಿವೆ
ವಿಭಜನೆ ವಿಘಟನೆ ನೈತಿಕ ಪತನಕೆ ಧೈರ್ಯ ಮೇರುಗಳೆ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ ಹಿಂದುತ್ವದ ಉಸಿರೆ |೩||

geludaniyu guDuguDugi sOlu sollaDagi
nALegaLu namadenisive Baravaseya nALegaLu namadenisive
SatakavidanaLedu maruSatakakido hiMdutva
vIrarasa honaludiside ||pa||

kattaleya kauravaru suttanoreddiralu
kShudra daurbalyagaLiginneliya tANa
pAMcajanyavu moLage karmayOgada karege
pAMDavage rOmAMcana
dharmasaMrakShaNege rAShTrapunarunnatige dharmave avatariside ||1||

namagOrvaLe tAyi nityavAtsalyamayi
avaLu salahida sutaru nAveMba nenapu
baradeMbudEnilla enna sAdhaneyella tAya gauravakE muDipu
arpaNeyoLagAnaMda nErpagoMDihuvudilli
rAShTrIyateyu meredide ||2||

kapaTa matAMtara AmiSha aMjike
nADina nADiya vyApisire
svatvava maresi vidESIya meresuva BramegaLe badukanu rUpisive
viBajane viGaTane naitika patanake dhairya mErugaLe kaMpiside
mRuta saMjIvini uttaraveMdare hiMdutvada usire |3||

6 comments:

Unknown said...

Beautifull lyrics..who is the lyricist of this song please

Unknown said...

Singing is also beautifull..thankyou

Anonymous said...

🚩🚩

Anonymous said...

Refer youtube

Anonymous said...

🚩 ಹರಿ ಓಂ 🚩

Anonymous said...

Can you teach us these songs?