ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Thursday, April 22, 2010
ಸಾಮರಸ್ಯದ ನವ್ಯಯುಗಕೆ : sAmarasyada navyayugake
ಸಾಮರಸ್ಯದ ನವ್ಯಯುಗಕೆ ನಿಮಗಿದೋ ಆಮಂತ್ರಣ |
ಕಣ್ಣತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನ
ಮಾಡಿ ಸೀಮೋಲ್ಲಂಘನ ||ಪ||
ಭರತ ಭೂಮಿಯ ಚರಿತೆಯೊಡಲಲಿ ಅಡಗಿದೆ ಕಥೆ ಸಾವಿರ
ಮಡಿಲ ಮಕ್ಕಳ ಸೋಲುಗೆಲುವಿನ ನೋವು ನಲಿವಿನ ಹಂದರ
ಪ್ರಗತಿ ಪತನದ ಕಥನ ಮಥನದಿ ಸತ್ಯವಾಗಲಿ ಗೋಚರ
ಮತ್ತೆ ಮೂಡಲಿ ಭಾಸ್ಕರ ||೧||
ಖಡ್ಗಬಲದಿಂ ಕುಟಿಲತನದಿಂ ನಡೆಯಿತಿಲ್ಲಿ ಮತಾಂತರ
ಒಂದೆ ನೆತ್ತರ ಬಂಧುಗಳಲಿ ಹಗೆಯ ವಿಷಬೀಜಾಂಕುರ
ಓಡೆದು ಆಳುವ ಕಪಟ ನೀತಿಯು ತಂದಿತೋ ಗಂಡಾಂತರ
ವಿಭಜನೆಯ ಫಲ ಭೀಕರ ||೨||
ನಮ್ಮ ನಾಡನು ತುಂಡುಗೈದಿಹ ಧೂರ್ತಕೃತ್ಯವ ಖಂಡಿಸಿ
ಅರಿಯ ಜೊತೆಯೆಲಿ ಸಂಚುಹೂಡಿಹ ಭಂಡ ಜನರನು ದಂಡಿಸಿ
ರಾಷ್ಟ್ರವೆಮದು ಅಖಂಡವೆಂದು ವಿಶ್ವದೆದುರಲಿ ಮಂಡಿಸಿ
ಮಾತೃ ಭೂಮಿಯ ವಂದಿಸಿ ||೩||
ಮೌನ ಮುರಿದು ಮಾತನಾಡಿ, ಎದೆಯ ಭಾವಕೆ ದನಿಯ ನೀಡಿ
ಸಖ್ಯ ಬೆಳೆಸಿ ಭೇದ ಮರೆತು, ಮುಖ್ಯವಾಹಿನಿಯಲ್ಲಿ ಬೆರೆತು
ಬಿಂಕ ಬಿಗುಮಾನವನು ತ್ಯಜಿಸಿ, ಶಂಕೆ ಅಂಜಿಕೆ ದೂರವಿರಿಸಿ
ಬನ್ನಿ ಐಕ್ಯದ ದೀಕ್ಷೆ ಧರಿಸಿ ||೪||
sAmarasyada navyayugake nimagidO AmaMtraNa |
kaNNateredu Brameya toredu, nIDi hArdika spaMdana
mADi sImOllaMGana ||pa||
Barata BUmiya cariteyoDalali aDagide kathe sAvira
maDila makkaLa sOlugeluvina nOvu nalivina haMdara
pragati patanada kathana mathanadi satyavAgali gOcara
matte mUDali BAskara ||1||
KaDgabaladiM kuTilatanadiM naDeyitilli matAMtara
oMde nettara baMdhugaLali hageya viShabIjAMkura
ODedu ALuva kapaTa nItiyu taMditO gaMDAMtara
viBajaneya Pala BIkara ||2||
namma nADanu tuMDugaidiha dhUrtakRutyava KaMDisi
ariya joteyeli saMcuhUDiha BaMDa janaranu daMDisi
rAShTravemadu aKaMDaveMdu viSvadedurali maMDisi
mAtRu BUmiya vaMdisi ||3||
mauna muridu mAtanADi, edeya BAvake daniya nIDi
saKya beLesi BEda maretu, muKyavAhiniyalli beretu
biMka bigumAnavanu tyajisi, SaMke aMjike dUravirisi
banni aikyada dIkShe dharisi ||4||
Subscribe to:
Post Comments (Atom)
No comments:
Post a Comment