Thursday, April 22, 2010

ಹೂ ಹರೆಯದ ಹೊಂಗನಸುಗಳೆ : hU hareyada hoMganasugaLe


ಹೂ ಹರೆಯದ ಹೊಂಗನಸುಗಳೆ
ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾದೇವಿ ಮಂಗಳೆ ಸುಮಂಗಳೆ
ಎಚ್ಚರಾಗಿ ಕನಸು ಕಂಗಳೆ ||ಪ||

ನೋವಿನಿರುಳು ನರಳಿ ನರಳಿ ಸರಿದಿದೆ
ನಗುವು ನಲಿವಿಗಾಗಿ ಕದವ ತೆರೆದಿದೆ
ಸೂತ್ರಬದ್ಧ್ರ ಕಾರ್ಯ ನಮ್ಮ ಎದುರಿದೆ
ಲೋಕ ನಮ್ಮ ನಿಲುವಿಗಾಗಿ ಕಾದಿದೆ
ಅಬಲಶಕ್ತರಲ್ಲ ಸಬಲರು ನಾವೆಲ್ಲಾ
ಹಗಲಿಗರಳಬೇಕು ನೈದಿಲೆ ||೧||

ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ
ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಹೊಡೆದ ವೀರ ಹುಡುಗ ಹೊಯ್ಸಳಾ
ವೀರ ವಾರಸಿಕೆಯೆ ಹಿಂದು ಸಂಕುಲ
ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ
ರಾಷ್ಟ್ರಶಕ್ತಿಗದುವೆ ಹಿನ್ನೆಲೆ ||೨||

ಸೋಲಿನಸುರ ಹೊಂದಬೇಕು ಅವನತಿ
ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಕಾರ್ಯಕಾಲ ಕಾಯುತಿಹಳು ಭಾರತಿ
ರಾಷ್ಟ್ರರಥಕೆ ನಮ್ಮ ಶಕ್ತಿ ಸಾರಥಿ
ಛಲದಲಿ ಓಂದಾಗಿ ಜಗದಲಿ ಮುಂದಾಗಿ
ನಿಲುವುದೊಂದೆ ನಮ್ಮ ಮುನ್ನೆಲೆ ||೩||

hU hareyada hoMganasugaLe
ELi ELi eccarAgi kanasu kaMgaLe
kattalegidu sAvu suttalu muMjAvu
karevaLuShAdEvi maMgaLe sumaMgaLe
eccarAgi kanasu kaMgaLe ||pa||

nOviniruLu naraLi naraLi saridide
naguvu nalivigAgi kadava teredide
sUtrabaddhra kArya namma eduride
lOka namma niluvigAgi kAdide
abalaSaktaralla sabalaru nAvellA
hagaligaraLabEku naidile ||1||

huliya maNisi halleNisida Barata bala
cakravyUha muridA aBimanyu Cala
huliya hoDeda vIra huDuga hoysaLA
vIra vArasikeye hiMdu saMkula
putraBAvadoLage, kShAtraBAva beLage
rAShTraSaktigaduve hinnele ||2||

sOlinasura hoMdabEku avanati
geluvina svara paDeyabEku unnati
kAryakAla kAyutihaLu BArati
rAShTrarathake namma Sakti sArathi
Caladali OMdAgi jagadali muMdAgi
niluvudoMde namma munnele ||3||

1 comment:

Unknown said...

Kinkinisuva kankanagala kaigalu. ..
That para is missing