Thursday, April 22, 2010

ಐಕ್ಯತೆಯು ಮಣ್ಗೂಡಿ : aikyateyu maNgUDi


ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು
ನಿನಗೊಬ್ಬನಿಗೆ ಮಾತ್ರ ಬರಲಿಲ್ಲ ನಿದ್ದೆ
ಗಾಳಿಯನು ಸೀಳಿ ಬಹ ಸುಯ್ಯೆಲರ ಶಬ್ದಕ್ಕೆ
ಸುಖದ ಸುಪ್ಪತ್ತಿಗೆಯನೊದ್ದೆ ಮೇಲೆದ್ದೆ ||ಪ||

ಮೈಮರೆತ ಸೋದರರ ನಾಯಪಾಡನು ನೋಡಿ
ಬೆಂಕಿ ಹೊತ್ತಿದ ಹೃದಯ ತಳಮಳಿಸಿತೇನು?
ತಾಯ್ನೆಲದ ಕಡುಮಮತೆ ತಿದಿಯನೊತ್ತಿದ ಹಾಗೆ
ಒಡಲೊಳಗೆ ಕರುಳ ಕುಡಿ ಮಿಡುಕಾಡಿತೇನು ||೧||

ಜಗವೆಲ್ಲ ಜಡವಾಗಿ ಮಲಗಿ ನಿದ್ರಿಸಿದಂದು
ನಟ್ಟಿರುಳಿನೊಳಗೊಬ್ಬನೇ ನಡೆದೆ ಮುಂದೆ
ಒಬ್ಬೊಬ್ಬ ಬಂಧುವನೆ ಮೇಲಕೆಬ್ಬಿಸಿ ತಂದು
ಸಂಘ ಸಂಜೀವಿನಿಯ ಸ್ವೀಕರಿಸಿರೆಂದೆ ||೨||

ಗಂಡೆದೆಯ ಗುಡಿಗಳಲಿ ಗೆಲ್ಲುಗಂಬವ ನಿಲ್ಲಿಸಿ
ಗೋಪುರದ ತುದಿಗೆ ನೀ ಕೈದೋರಿದಂದು
ಯುವಕಕೋಟಿಯ ಹೃದಯ ಮಾರುಹೋಯಿತು ನಿನಗೆ
ಭಾರತದ ಸೌಭಾಗ್ಯರವಿ ಬಂದನೆಂದ ||೩||

aikyateyu maNgUDi BAratiyu baLaliralu
ninagobbanige mAtra baralilla nidde
gALiyanu sILi baha suyyelara Sabdakke
suKada suppattigeyanodde mEledde ||pa||

maimareta sOdarara naayapADanu nODi
beMki hottida hRudaya taLamaLisitEnu?
taaynelada kaDumamate tidiyanottida haage
oDaloLage karuLa kuDi miDukADitEnu ||1||

jagavella jaDavAgi malagi nidrisidaMdu
naTTiruLinoLagobbanE naDede muMde
obbobba baMdhuvane mElakebbisi taMdu
saMGa saMjIviniya svIkarisireMde ||2||

gaMDedeya guDigaLali gellugaMbava nillisi
gOpurada tudige nI kaidOridaMdu
yuvakakOTiya hRudaya mAruhOyitu ninage
BAratada souBAgyaravi baMdaneMda ||3||

No comments: