Thursday, April 22, 2010

ಅಮೂರ್ತ ಮೂರ್ತ ಮೂರ್ತಿಮಂತ : amUrta moorta moortimaMta


ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ
ನಿನ್ನ ನಡೆಯ ನೆಲೆಯನಾಂತು ದೇಶಕಾಯ ತೊಡಗಲಿ ||ಪ||

ಮೊಗ್ಗು ಮೊಗವು ಬಿರಿಬಿರಿಯೆ ಹಿಡಿಹೂಗಳು ತಾವರಳಲಿ
ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ ||೧||

ಪುಷ್ಪಫಲದ ವಾಂಛೆಯುಳಿದು ಸಮರ್ಪಣೆಯ ಭಾವ ತಳೆದು
ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ ||೨||

ಲೋಕಸೇವಾ ಭಕ್ತಿ ಭಾವ ಎಂಬುದೊಂದೇ ಧ್ಯೇಯ ದೇವ
ನಿರತ ಪೂಜೆಯಿಂದ ದೇವ ನಿನ್ನ ರೂಪ ದೊರೆಯಲಿ ||೩||

ದಿವ್ಯ ಭವ್ಯ ರಾಷ್ಟ್ರಜ್ಯೋತಿ ನಿನ್ನ ತೇಜಕಿಲ್ಲ ಸಾಟಿ
ಜ್ಯೋತಿರ್ಮಯ ದೀಪ್ತಿಯಿಂದ ಸಕಲ ಹೃದಯ ಬೆಳಗಲಿ ||೪||

ನಿನಗೆ ಸರಿಸಮಾನರೆನಿಸಿ ಬೆಳೆದು ವರ್ಧಮಾನರೆನಿಸಿ
ದೇಶ ಧರ್ಮ ಸಂಸ್ಕೃತಿಗಳು ನೆಲೆಯನಾಂತು ಬೆಳೆಯಲಿ ||೫||

amUrta moorta moortimaMta ninnolu naavaagali
ninna naDeya neleyanaaMtu dESakARya toDagali ||pa||

moggu mogavu biribiriye hiDihUgaLu tAvaraLali
divyagaMdhavella haraDi avaniyu parimaLisali ||1||

puShpaphalada vAMCeyuLidu samarpaNeya BAva taLedu
dhyEyadEvanedurinalli svArtha hOmavAgali ||2||

lOkasEvA Bakti BAva eMbudoMdE dhyEya dEva
nirata pUjeyiMda dEva ninna rUpa doreyali ||3||

divya Bavya rAShTrajyOti ninna tEjakilla sATi
jyOtirmaya dIptiyiMda sakala hRudaya beLagali ||4||

ninage sarisamAnarenisi beLedu vardhamAnarenisi
dESa dharma saMskRutigaLu neleyanAMtu beLeyali ||5||

No comments: