Sunday, April 4, 2010

ಗಡಿಗಳಲ್ಲಿ ಶತ್ರುಪಡೆಯು : gaDigaLalli SatrupaDeyu


ಗಡಿಗಳಲ್ಲಿ ಶತ್ರುಪಡೆಯು ಗುಂಡಿನಾಟ ನಡೆಸಿದೆ
ಮೈಮರೆತು ಮಲಗಿದೆ ಹಿಂದುದೇಶ |
ಗೆಳೆಯ ನೀನು ಎಚ್ಚರಾಗಿ ಟೊಂಕಕಟ್ಟದಿದ್ದರೆ
ಕಾದಿಹುದು ನಾಡಿಗೆ ಸರ್ವನಾಶ
ಮೊಳಗಿಸಿಂದು ಜಾಗೃತಿಯ ವೀರಘೋಷ
ಜೈ ಭಾರತಿ ಜೈ ಜೈ ಭಾರತಿ ||ಪ||

ದೈನ್ಯಕಳೆದು ದಾಸ್ಯವಳಿದು ರಾಷ್ಟ್ರವಾಯಿತು ಸ್ವತಂತ್ರ
ಮಾತೃಭುವಿಯ ಛಿತ್ರಗೈದ ಧೂರ್ತ ಅರಿಗಳಾ ಕುತಂತ್ರ
ಅರಿಯಲಾರೆಯಾ ಕಣ್ ತೆರೆಯಲಾರೆಯಾ?
ವಿಪತ್ತಿನಿಂದ ನಾಡ ಪಾರು ಮಾಡಲಾರೆಯಾ?
ಮೈಮರೆತು ಮಲಗಿದೆ ಹಿಂದು ದೇಶ
ಮೊಳಗಿಸಿಂದು ಜಾಗೃತಿಯ ವೀರಘೋಷ ||೧||

ಪಂಚನದಿಯ ಪುಣ್ಯನೆಲವು ಪಂಜಾಗಿ ಉರಿಯುತಿಹುದು
ಕಾಶ್ಮೀರದೊಡಲಿನಿಂದ ರಕ್ತಧಾರೆ ಹರಿಯುತಿಹುದು
ನೀಡಲಾರೆಯಾ ಕೈ ನೀಡಲಾರೆಯಾ?
ನೋವಿನಿಂದ ನಾಡ ಕಾಪಾಡಲಾರೆಯಾ?
ಮೈಮರೆತು ಮಲಗಿದೆ ಹಿಂದು ದೇಶ
ಮೊಳಗಿಸಿಂದು ಜಾಗೃತಿಯ ವೀರಘೋಷ ||೨||

ಎಲ್ಲ ಭೇಧವನ್ನು ಮರೆತು ಐಕ್ಯಶಕ್ತಿಯಿಂದ ಬೆರೆತು
ದ್ರೋಹಿ ಜನರ ಶಿರವ ಮೆಟ್ಟಿ ಅರಿಯ ಯಮನ ಸದನಕಟ್ಟಿ
ಕಟ್ಟಲಾರೆಯಾ ನಾಡ ಕಟ್ಟಲಾರೆಯಾ?
ಭರತಭುವಿಯ ಪರಮಗುರಿಯ ಮುಟ್ಟಲಾರೆಯಾ?
ಮೈಮರೆತು ಮಲಗಿದೆ ಹಿಂದು ದೇಶ
ಮೊಳಗಿಸಿಂದು ಜಾಗೃತಿಯ ವೀರಘೋಷ ||೩||

gaDigaLalli SatrupaDeyu guMDinATa naDeside
maimaretu malagide hiMdudESa |
geLeya nInu eccarAgi ToMkakaTTadiddare
kAdihudu nADige sarvanASa
moLagisiMdu jAgRutiya vIraGOSha
jai BArati jai jai BArati ||pa||

dainyakaLedu dAsyavaLidu rAShTravAyitu svataMtra
mAtRuBuviya Citragaida dhUrta arigaLA kutaMtra
ariyalAreyA kaN tereyalAreyA?
vipattiniMda nADa pAru mADalAreyA?
maimaretu malagide hiMdu dESa
moLagisiMdu jAgRutiya vIraGOSha ||1||

paMcanadiya puNyanelavu paMjAgi uriyutihudu
kASmIradoDaliniMda raktadhAre hariyutihudu
nIDalAreyA kai nIDalAreyA?
nOviniMda nADa kApADalAreyA?
maimaretu malagide hiMdu dESa
moLagisiMdu jAgRutiya vIraGOSha ||2||

ella BEdhavannu maretu aikyaSaktiyiMda beretu
drOhi janara Sirava meTTi ariya yamana sadanakaTTi
kaTTalAreyA nADa kaTTalAreyA?
BarataBuviya paramaguriya muTTalAreyA?
maimaretu malagide hiMdu dESa
moLagisiMdu jAgRutiya vIraGOSha ||3||

No comments: