Thursday, April 22, 2010

ಚಿಮ್ಮುತಿದೆ ನೋಡಿಲ್ಲಿ ಧ್ಯೇಯ ಕಾರಂಜಿ : Chimmutide Nodilli


ಚಿಮ್ಮುತಿದೆ ನೋಡಿಲ್ಲಿ ಧ್ಯೇಯ ಕಾರಂಜಿ
ಹೊಮ್ಮಿಸುತ ಹೊಂಗನಸಿನೋಕುಳಿಯ ಮನಮನದಿ ||ಪ||

ನಿಷ್ಕ್ರಿಯತೆ ಕರಿನೆರಳ ಚಾಚಿರಲು ನಾಡಗಲ
ಜಡತೆಯಿಂ ಮೈಮರೆತು ಮಲಗಿರಲು ಹಿಂದು ನೆಲ
ಸ್ಫೂರ್ತಿ ಉತ್ಸಾಹಗಳ ಹೊನಲನ್ನು ಹರಿಸಿ
ಮುಚ್ಚಿರುವ ಭ್ರಮೆಯಾಂತ ಕಂಗಳನು ತೆರೆಸಿ ||೧||

ನಾಡನೋವಳಿಸುತಿಹ ದಿವ್ಯ ಸಂಜೀವಿನಿಯು
ಸಾವನ್ನೆ ಸಾಯಿಸುವ ಈ ಜೀವವಾಹಿನಿಯು
ವೇದಘೋಷದ ನೆಲದ ಪುಣ್ಯತಮ ಸ್ರೋತ
ಶಿವಪ್ರತಾಪರ ಶೌರ್ಯದಮರ ಸಂಕೇತ ||೨||

ಕೇಶವರು ನೆಟ್ಟಿರುವ ಸಂಘರೂಪದ ಸಸಿಗೆ
ನೀರುಣಿಸಿ ಅನವರತ ಪೋಷಿಸಿತು ಈ ಒಸಗೆ
ಹೀನತೆಯ ದೀನತೆಯ ರಾಡಿಯನು ತೊಳೆದು
ಆತ್ಮವಿಶ್ವಾಸ ತಾಯೊಲವ ಮೈತಳೆದು ||೩||

ಧರ್ಮರಕ್ಷಣೆಗೈವ ಕರ್ಮವೀರರ ಸ್ಫೂರ್ತಿ
ಜಗದಗಲ ಪಸರಿಸಿದೆ ಭಾರತದ ಘನಕೀರ್ತಿ
ಸಿರಿಗಂಗಾಜಲದಂತೆ ಪಾವನ ಸ್ವರೂಪಿ
ಚೈತನ್ಯ ಚಿಲುಮೆಯಿದು ವರವಿಶ್ವವ್ಯಾಪಿ ||೪||

cimmutide nODilli dhyEya kAraMji
hommisuta hoMganasinOkuLiya manamanadi ||pa||

niShkriyate karineraLa cAciralu nADagala
jaDateyiM maimaretu malagiralu hiMdu nela
sPUrti utsAhagaLa honalannu harasi
mucciruva BrameyAMta kaMgaLanu teresi ||1||

nAdanOvaLisutiha divya saMjIviniyu
sAvanne sAyisuva I jIvavAhiniyu
vEdaGOShada nelada puNyatama stOta
SivapratApara Sauryadamara saMkEta ||2||

kESavanu neTTiruva saMGarUpada sasige
nIruNisi anavarata pOShisitu I osage
hInateya dInateya rADiyanu toLedu
AtmaviSvAsa tAyolava maitaLedu ||3||

dharmarakShaNegaiva karmavIrara sPUrti
jagadagala pasariside BAratada GanakIrti
sirigaMgAjaladaMte pAvana svarUpi
caitanya cilumeyidu varaviSvavyApi ||4||

No comments: