Thursday, April 22, 2010

ಗೀತಾ ಗಂಗಾ ಗೋಮಾತಾ : gItA gaMgA gOmAtA


ಗೀತಾ ಗಂಗಾ ಗೋಮಾತಾ |
ಜೈ ಜೈ ಜೈ ಭಾರತಮಾತಾ ||ಪ||

ಉತ್ತರದಲ್ಲಿಹ ಹಿಮವಂತ
ನಾಡನು ಕಾಯುವ ಬಲವಂತ |
ಕವಿಸಾಧಕರಿಗೆ ಅನುದಿನವೂ
ಅಕ್ಷಯ ಸ್ಫೂರ್ತಿಯ ಕೊಡುವಾತ ||೧||

ಸಾಸಿರ ನದಿಗಳ ಪುಣ್ಯಜಲ
ಹರಿದಿದೆ ನಾಡಿನ ಉದ್ದಗಲ |
ಸಮೃದ್ಧಿಯ ಸುಧೆಯನು ಉಣಿಸಿ
ಈ ನೆಲವನು ಪಾವನಗೊಳಿಸಿ ||೨||

ಮನುಜತ್ವದ ಘನಸಾಧನೆಗೆ
ಅಮರತ್ವದ ಆರಾಧನೆಗೆ |
ಟೊಂಕವ ಕಟ್ಟಿರಿ ಬಂಧುಗಳೆ
ಗತವೈಭವ ಮರುಸ್ಥಾಪನೆಗೆ ||೩||

gItA gaMgA gOmAtA |
jai jai jai BAratamAtA ||pa||

uttaradalliha himavaMta
nADanu kAyuva balavaMta |
kavisAdhakarige anudinavU
akShaya sPUrtiya koDuvAta ||1||

sAsira nadigaLa puNyajala
haridide nADina uddagala |
samRuddhiya sudheyanu uNisi
I nelavanu pAvanagoLisi ||2||

manujatvada GanasAdhanege
amaratvada ArAdhanege |
ToMkava kaTTiri baMdhugaLe
gatavaiBava marusthApanege ||3||

No comments: