Thursday, April 22, 2010

ಯೋಧರೆ ಬಯಸಿ ಬನ್ನಿ : yOdharE bayasi banni


ಯೋಧರೇ ಬಯಸಿ ಬನ್ನಿ ಶುಭೋದಯಕೆ ಸ್ವಾಗತ
ಸ್ವರಾಷ್ಟ್ರದಾಕಾಸದಲ್ಲಿ ಸುಪ್ರಭಾತ ಸೃಜಿಸುತ ||ಪ||

ಏಳಿ ಏಳಿ ಬಯಲಗಾಳಿ ಸುಖಾಗಮನ ಹೇಳಿದೆ
ಹೆಜ್ಜೆ ಹೆಜ್ಜೆಗೂ ಸ್ವದೇಶ ತನ್ನ ಮಹಿಮೆ ತಿಳಿಸಿದೆ
ಯಜ್ಞಭೂಮಿ ಯಾಗಭೂಮಿ ತ್ಯಾಗಭೂಮಿ ಭಾರತ ||೧||

ನದಿಸಮೂಹ ಮಂತ್ರ ಹಾಡಿ ನಿತ್ಯ ಸ್ಪೂರ್ತಿ ನೀಡಿದೆ
ಜನರ ಮನವ ನೆಲದ ಕಣವ ಅತಿ ಪವಿತ್ರ ಮಾಡಿದೆ
ಮಾತೃಭೂಮಿ ಪಿತೃಭೂಮಿ ಗುರುಸ್ವರೂಪಿ ಭಾರತ ||೨||

ಅನಾದಿಯಿಂದ ಸಾಧು ಸಂತ ಭಕ್ತರಿಲ್ಲಿ ಬೆಳೆದರು
ಅಸಂಖ್ಯ ವೀರ ಶೂರರಿಲ್ಲಿ ಶಕ್ತರಾಗಿ ಮೆರೆದರು
ಧರ್ಮಭೂಮಿ ಕರ್ಮಭೂಮಿ ವೀರಭೂಮಿ ಭಾರತ ||೩||

ತಾನಾಗಬಲ್ಲನಿಲ್ಲಿ ನರನು ನಾರಾಯಣ
ಅಮರಗಾನ ಮೊಳಗುತಿಹವು ಗೀತೆ ರಾಮಾಯಣ
ಪುಣ್ಯಭೂಮಿ ದೇವಭೂಮಿ ಮೋಕ್ಷಭೂಮಿ ಭಾರತ ||೪||

yOdharE bayasi banni SuBOdayake svAgata
svarAShTradAkAsadalli supraBAta sRujisuta ||pa||

ELi ELi bayalagALi suKAgamana hELide
hejje hejjegU svadESa tanna mahime tiLiside
yaj~jaBUmi yAgaBUmi tyAgaBUmi BArata ||1||

nadisamUha maMtra hADi nitya spUrti nIDide
janara manava nelada kaNava ati pavitra mADide
mAtRuBUmi pitRuBUmi gurusvarUpi BArata ||2||

anAdiyiMda sAdhu saMta Baktarilli beLedaru
asaMKya vIra SUrarilli SaktarAgi meredaru
dharmaBUmi karmaBUmi vIraBUmi BArata ||3||

tAnAgaballanilli naranu nArAyaNa
amaragAna moLagutihavu gIte rAmAyaNa
puNyaBUmi dEvaBUmi mOkShaBUmi BArata ||4||

No comments: