Thursday, February 5, 2015

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ : Dhyeyada Hadige Bala Nadige Sagide

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ
ಬಾಳ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ ||  ||

ಕರದಿ ಸಂಘ ಸೂತ್ರ ಹಿಡಿದು
ಭರದಿ ಹಿಂದು ತೇರನೆಳೆದು
ತರತಮ ವಿಷ ಕಳೆಯ ಕೀಳಿ
ಪರಕೀಯತೆ ಪದರ ಸೀಳಿ
ಸಂಘ ಮಂತ್ರ ಜಪಿಸುತ ಬಂಧು ಭಾವ ಬೆಳೆಸುತ  ||||

ಸ್ವಾರ್ಥ ಭಾವ ದೂರಗೊಳಿಸಿ
ಕೀರ್ತಿ ಮೋಹ ಬದಿಗೆ ಸರಿಸಿ
ಅರಳಿಸುತಲಿ ಶುದ್ಧ ಶೀಲ
ಅರ್ಪಿಸುತಲಿ ಬದ್ಧ ಬಾಳ
ಬನ್ನಿ ತಾಯ ಸೇವೆಗೆ ಉರಿಸಿ ಕಾಯ ದೀವಿಗೆ  || ೨ ||

ವ್ಯಕ್ತಿ ವ್ಯಕ್ತಿಗಳನು ಬೆಸೆದು
ಭಕ್ತಿ ಶಕ್ತಿಗಳನು ಹೊಸೆದು
ಕುಡಿದು ವೀರವ್ರತದ ಸುಧೆ
ದುಡಿದು ಸೃಜಿಸಿ ಕಾರ್ಯಪಡೆ
ಮಾಡಲಿಹೆವು ನನಸು ನಾಡಿನೇಳ್ಗೆ ಕನಸು || ೩ ||


Labels: ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ, ‍Dhyeyada Hadige Bala Nadige Sagide, ಕನ್ನಡ, Kannada, ಸಂಘ ಗೀತ, Sangha Geeta

2 comments:

Unknown said...

Can i get mp3 of this song please?

ಕಾರ್ಯಕರ್ತ said...

I don't have one. But I will try to get someone in our shakha to sing the song and will post it.