Friday, August 2, 2013

ನುಗ್ಗು ಮುಂದಕೆ ನೀ ನುಗ್ಗು : Nuggu Mundake Nee Nuggu

ನುಗ್ಗು ಮುಂದಕೆ ನೀ ನುಗ್ಗು ಮುಂದಕೆ
ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿ ಮೆರೆವ ಅರಿಗಳ
ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ  ||ಪ||

ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆ
ನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆ
ಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲು
ಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು   ||೧||

ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರ
ಕಾಣುತಿಹುದು ಕಣ್ಣ ಮುಂದೆ ಭೀತಿ ತರುವ ವಿಷದ ಚಕ್ರ
ಅಮ್ಮ ನಿನ್ನ ಮಕ್ಕಳೆಲ್ಲ ತುಂಬಿಕೊಂಡು ಭೇದಭಾವ
ಕಾದಿ ಮಡಿವ ದೃಶ್ಯ ಕಂಡು ನೊಂದೆ ತಾಯೇ ಭಾರತೀ ||೨||

ಮತ್ತಮುತ್ತಿದಂಥ ಘೋರ ಅಂಧಕಾರ ತೊಡೆವೆನಿಂದು
ಎನ್ನ ಬಾಳ ಭವ್ಯ ಗುರಿಯ ತೋರಿಸಿದೆ ಸಂಘವಿಂದು
ಎನ್ನ ಸರ್ವಶಕ್ತಿ ಸುರಿದು ಸಂಘ ಕಾರ್ಯಗೈದು ನಾನು
ಭವ್ಯ ಬಾಳು ಬಾಳುವಂತೆ ಹರಸು ಎನ್ನ ಓ ಪ್ರಭೋ  ||೩||

nuggu muMdake nI nuggu muMdake
higginiMda baggu baDidu sokki mereva arigaLa
lagge hAki saggasirige nuggu geluvinaMgaLakke ||pa||

nOvanella nuMgi nInu nammanella salahide
ninna nAvu mareta nOvu edeyanella tuMbide
aMdugaida pApa toLedu matte SuddharAgalu
biDade ninna sEvisuva satvaSIla sutarolu ||1||

ninna aMga aMgavella BaMgavAgi hOda citra
kANutihudu kaNNa muMde BIti taruva viShada cakra
amma ninna makkaZLella tuMbikoMDu BEdaBAva
kAdi maDiva dRuSya kaMDu noMde tAyE BAratI ||2||

mattamuttidaMtha GOra aMdhakAra toDeveniMdu
enna bALa Bavya guriya tOriside saMGaviMdu
enna sarvaSakti suridu saMGa kAryagaidu nAnu
Bavya bALu bALuvaMte harasu enna O praBO ||3||


Labels: ಕನ್ನಡ, ಸಂಘ ಗೀತ, Kannada, Sangha Geeta, ನುಗ್ಗು ಮುಂದಕೆ ನೀ ನುಗ್ಗು ಮುಂದಕೆ, Nuggu Mundake Nee Nuggu

4 comments:

Anand Mulimani said...

ಪಲ್ಲವಿ ಇರೋದೆ ಬೇರೆ ಹಾಡಿಂದು
ಚರಣ ಇರೋದೇ ಬೇರೆ ಹಾಡಿಂದು

Unknown said...

RSS hindu🧡

Anonymous said...

ನಿಜ

V said...

Please share the audio song