Saturday, July 24, 2010

ಸೇವೆಯ ಸೇತುವೆ ಕಟ್ಟಲು ಬನ್ನಿ : sEveya sEtuve kaTTalu


ಸೇವೆಯ ಸೇತುವೆ ಕಟ್ಟಲು ಬನ್ನಿ
ವ್ಯಕ್ತಿ ಸಮಾಜದ ನಡುವೆ || ಪ ||

ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ
ಸ್ವಾರ್ಥ ದುರಾಸೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ
ಕಂಗೆಡಿಸುವ ಕಗ್ಗತ್ತಲ ಕೂಪದಿ ಸೇವೆಯೆ ದಾರಿ ದೀಪ
ದುಃಖಿತ ಜನಗಳ ಕಂಬನಿ ಒರೆಸುವ ಕರುಣೆಯ ಮಾತೃ ಸ್ವರೂಪ || ೧ ||

ಅಕ್ಷರ ವಿದ್ಯೆಯ ಕಲಿಸಿ ನಿರಕ್ಷರ ಕುಕ್ಷಿಗಳಿಗೆ ಒಲವಿಂದ
ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ
ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯ ಮಾರ್ಗ
ತ್ಯಾಗ ಸಮರ್ಪಣ ಭಾವದಿ ದುಡಿದರೆ ಧರೆಯಿದು ಆಗದೆ ಸ್ವರ್ಗ || ೨ ||

ಮನೆಮನೆಯಾಗಲಿ ಸೇವಧಾಮ ಚಿರವಾತ್ಯಲದ ಸೆಲೆಯು
ನೋವಲಿ ನರಳಿಹ ಹತಭಾಗ್ಯರಿಗೆ ನಲಿವನು ನೀಡುವ ನೆಲೆಯು
ಅಸ್ಪೃಶ್ಯತೆ ಅನ್ಯಾಯವನಳಿಸಲು ಗೈಯ್ಯುವ ದೃಢ ಸಂಕಲ್ಪ
ಭಾರತ ಮಾತೆಯ ಆರಾಧನೆಗೆ ಅರ್ಪಿಸಿ ಜೀವನ ಪುಷ್ಪ || ೩ ||

sEveya sEtuve kaTTalu banni
vyakti samAjada naDuve || pa ||

sEveye tatvada sAravu nijadi sEveye jIvana dharma
svArtha durAseya nIgisi bALanu sArthakagoLisuva marma
kaMgeDisuva kaggattala kUpadi sEveye dAri dIpa
duHKita janagaLa kaMbani oresuva karuNeya mAtRu svarUpa || 1 ||

akShara vidyeya kalisi nirakShara kukShigaLige olaviMda
akShaya rakShaNe nIDuta SOShita janatege ChalabaladiMda
kArpaNyada GaTasarpada darpava muriyalu sEveya mArga
tyAga samarpaNa bhAvadi duDidare dhareyidu Agade svarga || 2 ||

manemaneyAgali sEvadhaama ciravAtyalada seleyu
nOvali naraLiha hatabhAgyarige nalivanu nIDuva neleyu
aspRushyate anyAyavanaLisalu gaiyyuva dRuDha saMkalpa
BArata mAteya Araadhanege arpisi jIvana puShpa || 3 ||

No comments: