ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Showing posts with label ತಾಯಿ ಭಾರತಿಯ ಪಾದ ಪದ್ಮಗಳ. Show all posts
Showing posts with label ತಾಯಿ ಭಾರತಿಯ ಪಾದ ಪದ್ಮಗಳ. Show all posts
Thursday, October 14, 2010
ತಾಯಿ ಭಾರತಿಯ ಪಾದ ಪದ್ಮಗಳ : tAyi BAratiya pAda
ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ
ಹಿಂದು ಸಾಗರದ ಬಿಂದು ಬಿಂದುಗಳೆ ಒಂದುಗೂಡಿ ಬನ್ನಿ ||ಪ||
ಧ್ಯೇಯ ಭಾಸ್ಕರನ ದಿವ್ಯ ಕಿರಣಗಳ ನವ್ಯ ರಮ್ಯ ಲಾಸ್ಯ
ತರುಣ ರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ
ಬಾಹು ಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ ||೧||
ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು
ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯ ದೀಪ್ತಿಯನ್ನು
ತ್ಯಾಗ ಸಾಹಸದ ಪುಷ್ಪ ಮಾಲೆಯನು ತಾಯ್ಗೆ ತೊಡಿಸಬನ್ನಿ ||೨||
ಮಾತೃಭೂವಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು
ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು
ಶಸ್ತ್ರ ಶಾಸ್ತ್ರಗಳ ಅಸ್ತ್ರ ಚಾಲನೆಗೆ ಸಿದ್ಧರಾಗಿ ಬನ್ನಿ ||೩||
ಭರತ ಭೂಮಿಯಲಿ ಭರದಿ ಭೋರಿಡಲಿ ದಿವ್ಯ ಪಾಂಚಜನ್ಯ
ಯೋಗ ಯಾಗಗಳ ತ್ಯಾಗ ಭೂಮಿಯಲಿ ಜನಿಸಿದವರೆ ಧನ್ಯ
ನಡ ರಕ್ಷಣೆಗೆ ಬಾಳ ಕ್ಷಣ ಕ್ಷಣವ ಮುಡಿಪು ನೀಡ ಬನ್ನಿ ||೪||
tAyi BAratiya pAda padmagaLa pUjisONa banni
hiMdu sAgarada biMdu biMdugaLe oMdugUDi banni ||pa||
dhyEya BAskarana divya kiraNagaLa navya ramya lAsya
taruNa raMgadoLu aruNagaiyutiha navOdayada nATya
bAhu bAhugaLa sphuraNagoLisutali naliyutIga banni ||1||
SaktiyiMda aBivyaktagoLisirai dESaBaktiyannu
taptamanagaLali suptavAgiruva dhyEya dIptiyannu
tyAga sAhasada puShpa mAleyanu tAyge toDisabanni ||2||
mAtRuBUviya vicCidragoLisutire kShudra ariya saMcu
pralayarudranurigaNNa teresirai harisi praKara miMcu
Sastra SAstragaLa astra cAlanege siddharAgi banni ||3||
Barata BUmiyali Baradi BOriDali divya pAMcajanya
yOga yAgagaLa tyAga BUmiyali janisidavare dhanya
naDa rakShaNege bALa kShaNa kShaNava muDipu nIDa banni ||4||
Subscribe to:
Posts (Atom)