ನಿಯಮಗಳು:
1. ಪ್ರತಿ ಶಾಖೆಯಿಂದ ಕನಿಷ್ಠ 6ನೇ ತರಗತಿಯಲ್ಲಿ ಓದುತ್ತಿರುವ ಕನಿಷ್ಠ 6 ಸ್ವಯಂಸೇವಕರಿರುವ ತಂಡ ಭಾಗವಹಿಸಬಹುದು. ಗರಿಷ್ಠ ವಯಸ್ಸಿನ ನಿರ್ಬಂಧವಿಲ್ಲ. ಗರಿಷ್ಠ ಸಂಖ್ಯೆಯ ನಿರ್ಬಂಧವಿಲ್ಲ.
2. ತಂಡವು ಹಾಡು ಮತ್ತು ಶ್ಲೋಕಗಳೆರಡರಲ್ಲೂ ಭಾಗವಹಿಸಬೇಕು.
3. ಒಂದು ಶಾಖೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು.
4. ಒಂದು ತಂಡದಲ್ಲಿ 9 ಕ್ಕಿಂತ ಹೆಚ್ಚು (ಅಂದರೆ 10 ರಿಂದ 19) ಸ್ವಯಂಸೇವಕರು ಭಾಗವಹಿಸಿದರೆ ಒಂದು ಬೋನಸ್ ಅಂಕ ಸಿಗುತ್ತದೆ.
5. ಒಂದು ತಂಡದಲ್ಲಿ 19 ಕ್ಕಿಂತ ಹೆಚ್ಚು (ಅಂದರೆ 20+) ಸ್ವಯಂಸೇವಕರು ಭಾಗವಹಿಸಿದರೆ ಎರಡು ಬೋನಸ್ ಅಂಕ ಸಿಗುತ್ತದೆ.
ಹಾಡು:
ಬನ್ನಿ ಸೋದರರೆ ಬನ್ನಿ ಬಾಂಧವರೆ
ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ ಬೆಸೆಯೋಣ |
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ ||ಪ||
ಹಸಿವಡಗಲಿ ತೃಷೆ ಹಿಂಗಲಿ - ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ - ಸುತರೆಮಗಿದು ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ ... ||೧||
ಕೊರತೆ ಕಲುಷಗಳನಳೆದಳೆದು - ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ - ಸಂಘಟನಾಬಲ ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ ... ||೨||
ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ... ||೩||

ಶ್ಲೋಕಗಳು
ಜುಲೈ ತಿಂಗಳ ಶ್ಲೋಕಗಳು
1. ಹಿಮಾಲಯಂ ಸಮಾರಭ್ಯ
ಯಾವದಿಂದು ಸರೋವರಂ ।
ತಂ ದೇವ ನಿರ್ಮಿತಂ ದೇಶಂ
ಹಿಂದುಸ್ಥಾನಂ ಪ್ರಚಕ್ಷತೆ ॥
2. ಯಥಾ ಚಿತ್ತಂ ತಥಾ ವಾಚಃ
ಯಥಾ ವಾಚಸ್ತಥಾ ಕ್ರಿಯಾಃ |
ಚಿತ್ತೇ ವಾಚಿ ಕ್ರಿಯಾಯಾಂ ಚ
ಮಹತಾಂ ಏಕರೂಪತಾ ||
3. ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ದುಹಂತಿ ಗಾವಃ |
ಪರೋಪಕಾರಾಯ ಬಹಂತಿ ನದ್ಯಃ
ಪರೋಪಕಾರಾರ್ಥಮಿದಂ ಶರೀರಂ ||
4. ಮಾತೃವತ್ ಪರದಾರೇಷು
ಪರದ್ರವ್ಯೇಷು ಲೋಷ್ಠವತ್ |
ಆತ್ಮವತ್ ಸರ್ವಭೂತೇಷು
ಯಃ ಪಶ್ಯತಿ ಸ ಪಂಡಿತಃ ||
ಅಗಸ್ಟ್ ತಿಂಗಳ ಶ್ಲೋಕಗಳು
1. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।
ಬೆಲ್ಲ ಸಕ್ಕರೆಯಾಗು ದೇನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ॥
2. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ|
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ||
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ||
3. ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ||
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ||
4. ದೇವರಿಗಿಲ್ಲ ಜಾತಿಯ ಭೇದ
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ - ಕಬೀರಾ||
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ - ಕಬೀರಾ||